ಕೃತ್ತಿಕಾ ರವೀಂದ್ರ ಕರ್ನಾಟಕದ ಚಲನಚಿತ್ರ ಹಾಗೂ ಕಿರುತೆರೆ ನಟಿಯಾಗಿದ್ದಾರೆ. ಇವರು "ರಾಧಾ ಕಲ್ಯಾಣ" ಎಂಬ ಧಾರವಾಹಿಯ ಮೂಲಕ ಖ್ಯಾತರಾಗಿದ್ದಾರೆ. ೨೦೧೫ರಲ್ಲಿ ನಡೆದ ಕಿರುತೆರೆ ಕಾರ್ಯಕ್ರಮ "ಬಿಗ್ ಬಾಸ್ - ಕನ್ನಡ ೩" ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. == ಕೌಟುಂಬಿಕ ಹಿನ್ನಲೆ == ಕೃತ್ತಿಕಾ, ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಅನಂದಪುರದ ಹವ್ಯಕ ಬ್ರಾಹ್ಮಣ ಸಮುದಾಯದ ರವೀಂದ್ರ ಹಾಗೂ ಮೀನಾರವರಿಗೆ ದಿನಾಂಕ ೧೭ ಮಾರ್ಚ್ ೧೯೯೪ರಂದು ಜನಿಸಿದರು. ಇವರು ಬಾಲ್ಯದಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡರು. ತಾಯಿ ಮೀನಾರವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಕೃತ್ತಿಕಾ ತಮ್ಮ ಶಿಕ್ಷಣವನನ್ನು ಆನಂದಪುರದ ಸಾಧನಾ ವಿದ್ಯಾ ಕೇಂದ್ರದಲ್ಲಿ ಪಡೆದರು. == ವೃತ್ತಿ ಜೀವನ == ಕೃತ್ತಿಕಾರವರು ೨೦೦೮ರಲ್ಲಿ ತಮ್ಮ ೧೪ನೇ ವಯಸ್ಸಿನಲ್ಲಿ "ಪಟ್ರೆ ಲವ್ಸ್ ಪದ್ಮ", ಎಂಬ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಬಳಿಕ "ಮನೆ ಮಗಳು" ಎಂಬ ಧಾರಾವಾಹಿಯ ಮುಲಕ ಕಿರುತೆರೆಯನ್ನು ಪ್ರವೇಶಿಸಿದರು. ಇವರು ನಟಿಸಿದ "ರಾಧಾ ಕಲ್ಯಾಣ" ರಾಧಿಕಾ ಪಾತ್ರ ಪ್ರಸಿದ್ದಿ ಪಡೆಯಿತು. ಈ ಧಾರಾವಾಹಿಯು ಸುಮಾರು ಮೂರುವರೆ ವರ್ಷಗಳ ಕಾಲ ಪ್ರಸಾರವಾಯಿತು. ೨೦೧೫ರಲ್ಲಿ ನಡೆದ "ಬಿಗ್ ಬಾಸ್ - ಕನ್ನಡ ೩"ರಲ್ಲಿ ಸ್ಫರ್ಧಿಯಾಗಿ ಭಾಗವಹಿಸಿದ್ದರು. == ಚಲನಚಿತ್ರ/ಧಾರಾವಾಹಿಗಳ ಪಟ್ಟಿ == === ಅಭಿನಯಿಸಿದ ಕನ್ನಡ ಚಲನಚಿತ್ರಗಳು === === ಅಭಿನಯಿಸಿದ ಧಾರಾವಾಹಿಗಳು === == ಉಲ್ಲೇಖಗಳು ==